Valentine

Thursday, September 18, 2008

ಪ್ರೇಯಸಿ




ಪ್ರೇಯಸಿ ನಾ ಬರೆವೆ ನನ್ನೆದೆಯ ಮಾತನು ಕೇಳೆಯಾ...

ಚಂದ್ರ ಬಿಂಬಕ್ಕಿಂತ ಕಾಂತಿ ನಿನ್ನ ಮುಖವು
ಕೋಗಿಲೆ ಗಿಂತ ಇಂಪು ನಿನ್ನ ಕಂಠವು
ಮುತ್ತು ಹವಳ ಬೀಳುವಂತಿಹುದು ನಿನ್ನ ನುಡಿಯು
ಹಂಸ ನಡೆಯುವಂತಿಹುದು ನಿನ್ನ ನಡೆಯು

ಓ ಹೋ ಪ್ರೇಯಸಿ ನಾ ಬರೆವೆ ನನ್ನೆದೆಯ ಮಾತನು ಕೇಳೆಯಾ...

ಅಂದ ನಿನ್ನ ಸ್ವಂತವೆಂದನೇನೊ ಬ್ರಹ್ಮನು
ಶ್ರಮಿಸಿ ಕೆತ್ತನೇನೊ ಈ ನಿನ್ನ ಶಿಲ್ಪವು
ನಾನೆಂದು ಕಾಣೆನು, ನಿನ್ನಂತ ಚಂದವು
ಮತ್ತೆಂದು ಕಾಣೆನೇನೊ ಜನುಮ ಜನುಮವು

ಓ ಹೋ ಪ್ರೇಯಸಿ ನಾ ಬರೆವೆ ನನ್ನೆದೆಯ ಮಾತನು ಕೇಳೆಯಾ...

ಮನದಲೀ ನೂರಾರು ಆಸೆಯು ಹರಿಯುತಿಹುದು
ಬಯಕೆಯು ಮನದಲೀ ಮತ್ತೊಂದು ಬಂದಿತು
ಸಂಗಾತಿ ಆಗ ಬೇಕು ನೀ ನನ್ನ ಬಾಳಲಿ
ಹೇಗೆ ನಾ ಹೇಳಲಿ, ಏನು ನಾ ಮಾಡಲಿ
ನೀ ನಿಲ್ಲದ ನನ್ನ ಬಾಳು ಶೂನ್ಯ ಶೂನ್ಯವು

ಓ ಹೋ ಪ್ರೇಯಸಿ ನಾ ಬರೆವೆ ನನ್ನೆದೆಯ ಮಾತನು ಕೇಳೆಯಾ...

0 comments:

Lamhe

Valentine

Sun Zara - The Woman In My Life!